ಅಂದ-ಚಂದದ ಸ್ವಚ್ಚಂದ ಮಗುಮನದ ದಿನಗಳವು
ನೆನಪಿನಂಗಳದಿ ಹರಡಿರುವ ಪರಿಮಳದ ಕಾರಣಗಳವು
ಅಗೆದಷ್ಟು ಮುಗಿಯದ ಅನುಭವದ ಎಳೆಗಳವು
ಬಚ್ಚಿಟ್ಟ ಭಾವನಗಳ ಸುಳಿ ಮಧ್ಯ ಸುತ್ತಿಟ್ಟ ಕನಸುಗಳ ಕಲರವ
ಮೋಹ-ವ್ಯೂಹಗಳ ನಂಟಿನಲಿ ಹೇಳಲಾಗದ ಆಂತರ್ಯದ ಅನುಭವ
ಯೋಚಿಸಿದಾಗ ಮೈಮರೆಸಿ ಮಿಂಚಂತೆ ನೆನಪಾಗುವ ದಿನಗಳ ಮರೆಯಲೇನು..??
No comments:
Post a Comment